ಕನ್ನಡ ಮತ್ತು ತುಲಸೀ 

ತುಳಸಿಯೂ ಮಾತೆ, 

ಕನ್ನಡತಿಯೂ ಮಾತೆ,


ಇವಳು ಕೃಷ್ಣನ ಅರಸಿ, 

ಇವಳು ರಾಜ್ಯದ ಅರಸಿ,

ಇವಳು ಆರೋಗ್ಯವರ್ಧಕ, 

ಇವಳು ಬುದ್ದಿವರ್ಧಕ,

ಇವಳಿಗೆ ಸಂಧ್ಯಾಕಾಲದಿ ಪೂಜೋತ್ಸವ, 

ಇವಳಿಗೆ ಸದಾಕಾಲವು ನಿತ್ಯೋತ್ಸವ.

ಇವರೀರ್ವರಿಗೂ ಇಂದು ನಡೆಯಲಿದೆ 

ಸಂಭ್ರಮದ ದೀಪೋತ್ಸವ.

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾಗೂ  

ತುಳಸಿ ಹಬ್ಬದ ಶುಭಾಶಯಗಳು.